ಟ್ರೆಡ್‍ಗೋಲ್ಡ್, ತಾಮಸ್
	1788-1829. ಆಂಗ್ಲೇಯ ಶಿಲ್ಪಿ ಮತ್ತು ಬಡಗಿ. ಮರಗೆಲಸದ ತತ್ತ್ವಗಳು (ಫ್ರಿನ್ಸಿಪಲ್ಸ್ ಆಫ್ ಕಾರ್ಪೆಂಟ್ರಿ) ಎಂಬ ಈತನ ಶಾಸ್ತ್ರೀಯ ವಿವೇಚನೆ ಇಂದಿಗೂ ಬಡಗಿಗಳ ಶ್ರೇಷ್ಠ ಕೈಪಿಡಿ ಆಗಿದೆ. ಈತ ತಾಂಡವಾಳ ಮೊದಲಾದ ತಾಂತ್ರಿಕ ಸಾಮಗ್ರ್ರಿಗಳ ಮೇಲೆಯೂ ಹವೆ ಯಂತ್ರ ಮುಂತಾದ ತಾಂತ್ರಿಕ ಸಲಕರಣೆಗಳ ಮೇಲೆಯೂ ಉಪಯುಕ್ತ ಹೊತ್ತಗೆಗಳನ್ನು ಬರೆದಿದ್ದಾನೆ. 	    (ಕೆ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ